ಶ್ರೀವರ್ಧನ್ ಕೋಟೆಯು ರಾಜ್ಮಾಚಿ ಕೋಟೆಯನ್ನು ನಿರ್ಮಿಸುವ ಎರಡು ಬೆಟ್ಟಗಳ ಕೋಟೆಗಳಲ್ಲಿ ಒಂದಾಗಿದೆ. ಇದು ರಾಜ್ಮಾಚಿ ಗ್ರಾಮದಲ್ಲಿದೆ. ಇದು ಸಹ್ಯಾದ್ರಿ ಪರ್ವತ ಶ್ರೇಣಿಯ ಲೋನಾವಲದಿಂದ ೫.೮ ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ೯೦೦ ಮೀ (೩೦೦೦ ಅಡಿ) ಎತ್ತರದಲ್ಲಿದೆ. ಇದಕ್ಕೆ ಶ್ರೀವರ್ಧನ್ ಗಣಪತ್ರಾವ್ ಪಟವರ್ಧನ್ ಅವರ ಹೆಸರನ್ನು ಇಡಲಾಗಿದೆ. ಕೋಟೆಯನ್ನು ಹೊರತುಪಡಿಸಿ ಯಾವುದೇ ಗೋಚರ ನಿರ್ಮಾಣ ಇಲ್ಲಿ ಇಲ್ಲ. ಇದನ್ನು ಸಹ್ಯಾದ್ರಿ ಪ್ರದೇಶದ ಕಾವಲು ಗೋಪುರವಾಗಿ ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ. ಬೆಟ್ಟದ ತುದಿಯಲ್ಲಿ ಎರಡು ನೀರಿನ ತೊಟ್ಟಿಗಳಿದೆ. ಅದರಲ್ಲಿ ಒಂದು ತೊಟ್ಟಿಯಲ್ಲಿ ಕಬ್ಬಿಣದ ಕಂಬವಿದೆ. == ತಲುಪುವುದು ಹೇಗೆ == ಕೋಟೆಯನ್ನು ತಲುಪಲು ಎರಡು ಮಾರ್ಗಗಳಿವೆ: ೧) ಲೋನಾವ್ಲಾ ತುಂಗರ್ಲಿ ಮಾರ್ಗ- ಇದು ಸುಲಭವಾದ ಮಾರ್ಗವಾಗಿದ್ದು, ಮೂಲ ಗ್ರಾಮ ಉಧೇವಾಡಿಯಾಗಿರುತ್ತದೆ. ೨) ಕರ್ಜತ್ - ಇಲ್ಲಿಂದ ಕೊಂಡಿವಾಡೆ ಮಾರ್ಗವನ್ನು ತಲುಪಲು ಸುಮಾರು ೧ ಗಂಟೆ ತೆಗೆದುಕೊಳ್ಳುತ್ತದೆ. ೨-ಗಂಟೆಗಳ ಕಾಲ ಬೆಟ್ಟದ ಮೇಲೆ ಚಾರಣ ಮಾಡಬೇಕಾಗುತ್ತದೆ. ಈ ಮಾರ್ಗವು ಉಲ್ಲಾಸ್ ನದಿ ಕಣಿವೆಯ ಮೂಲಕ ದಟ್ಟವಾದ ಅರಣ್ಯ ಪ್ರದೇಶದ ಮೂಲಕ ಹಾದುಹೋಗುತ್ತದೆ. == ಉಲ್ಲೇಖಗಳು == == ಸಹ ನೋಡಿ == ಶಿವಾಜಿ ಕೊಂಡಾಣ ಗುಹೆಗಳು